|
ಇಂದಿನ ಸುದ್ದಿಗಳು |
ಮಕ್ಕಳ ದಿನಾಚರಣೆ ಅಂಗವಾಗಿ ಇಂದು ಬಾಲಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರಾದ ಶ್ರೀ ಹೆಚ್.ಆರ್.ಭಾರದ್ವಾಜ್ ಅವರು ಬೆಂಗಳೂರಿನ ಮಾ|| ಸಚಿನ್ ತಂಬದ್ ಹಾಗೂ ಬಿಜಾಪುರದ ಮಾ|| ಸಂಗಮೇಶ್ ಎಸ್.ಅಥನೂರು ಇವರಿಗೆ ೨೦೦೯-೧೦ನೇ ಸಾಲಿನ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದರು.
ರಾಜ್ಯ ಸರ್ಕಾರವು ವಿವಿಧ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ಹೊಂದಿರುವ ಮಕ್ಕಳನ್ನು ರಾಷ್ಟ್ರ ಪ್ರಶಸ್ತಿಗಾಗಿ ಆಯ್ಕೆ ಮಾಡಿ ಕಳುಹಿಸಿಕೊಡಲಾಗಿರುವ ಮಕ್ಕಳನ್ನು ಪುರಸ್ಕರಿಸಲಾಯಿತು. ಇವರಲ್ಲಿ ಬೆಂಗಳೂರಿನ ಕು|| ಶೃತಿ. ಎಸ್ (ಚಿತ್ರಕಲೆ) ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕವನ್ನು ಹಾಗೂ ದಾವಣಗೆರೆಯ ಮಾ|| ಎ.ಎಂ ಆನಂದ್ (ಶೈಕ್ಷಣಿಕ) ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.
ರಾಜ್ಯ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಸೃಜನಾತ್ಮಕ ಕಲೆ, ಬರವಣಿಗೆ, ಪ್ರದರ್ಶನ ಕಲೆ ಹಾಗೂ ವಿಜ್ಞಾನದಲ್ಲಿ ನೂತನ ಆವಿಷ್ಕಾರಕ್ಕಾಗಿ ಕಲಾಶ್ರೀ ಪ್ರಶಸ್ತಿ ಪಡೆದ ಮಕ್ಕಳ ವಿವರ ಈ ಕೆಳಕಂಡಂತಿದೆ.
ಕೊಡಗು ಜಿಲ್ಲೆಯ ಕು|| ಯಶಸ್ವಿನಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕು|| ಶಬರಿ ವೈ ಗಾಣಿಗ ಇವರು ಸೃಜನಾತ್ಮಕ ಕಲೆಗಾಗಿ, ಹಾಸನ ಜಿಲ್ಲೆಯ ಕು|| ಸೌಮ್ಯ ಜಿ.ಎಸ್ ಹಾಗೂ ಮೈಸೂರು ಜಿಲ್ಲೆಯ ಮಾ|| ಅನಿರುದ್ಧ್ ಡಿ ಇವರು ಸೃಜನಾತ್ಮಕ ಬರವಣಿಗಾಗಿ, ಹಾಸನ ಜಿಲ್ಲೆಯ ಮಾ|| ಚಂದ್ರಮೌಳಿ.ಕೆ.ಕಂದಾಚಾರ್ ಹಾಗೂ ಕು|| ಎಂ. ನೀಲಮ್ಮ ಜೂಲಿಯಸ್ ಇವರು ವಿಜ್ಞಾನದಲ್ಲಿ ನೂತನ ಆವಿಷ್ಕಾರಕ್ಕಾಗಿ, ಬೆಂಗಳೂರು ಜಿಲ್ಲೆ ಕು|| ರಶ್ಮಿ ರವಿಶಂಕರ್, ಚಿಕ್ಕಮಗಳೂರು ಜಿಲ್ಲೆಯ ಕು|| ಡಿ.ಎಸ್ ಸೀತಾ ಪ್ರಜ್ಞಾ, ದಾವಣಗೆರೆ ಜಿಲ್ಲೆಯ ಮಾ|| ಉದಯ್, ರಾಮನಗರ ಜಿಲ್ಲೆಯ ಕು|| ಪುನರ್ವಸು ವೆಂಕಟೇಶ್, ಬೆಳಗಾವಿ ಜಿಲ್ಲೆಯ ಕು|| ಧನ್ಯಶ್ರೀ ಹಾಗೂ ಬಿಜಾಪುರ ಜಿಲ್ಲೆಯ ಮಾ|| ಸಮಿತ್ ಪಿ ಶಿಂಧೆ ಇವರು ಸೃಜನಾತ್ಮಕ ಪ್ರದರ್ಶನ ಕಲೆಗಾಗಿ ಕಲಾಶ್ರೀ ಪ್ರಶಸ್ತಿಯನ್ನು ಪಡೆದರು.
ಬಾಲಮಂದಿರ ಮಕ್ಕಳ ಸಾಧನೆಗಾಗಿ ನೀಡಲಾಗುವ ಪ್ರತಿಭಾ ಪುರಸ್ಕಾರವನ್ನು ಶಿವಮೊಗ್ಗ ಜಿಲ್ಲೆಯ ಅರುಣ್ ಕುಮಾರ್ ಸೃಜನಾತ್ಮಕ ಬರವಣಿಗೆಗಾಗಿ, ಹಾಸನ ಜಿಲ್ಲೆಯ ಉಮೇಶ್ ಹಾಗೂ ಧಾರವಾಡ ಜಿಲ್ಲೆಯ ಅಕ್ಷತ ಜಿ ಮಡಗಾಂವ್‌ಕರ್, ಶಕುಂತಲ, ಕಮಲವ್ವ ಹೆಚ್ ಲಮಾಣಿ, ಶಶಿಕಲ, ಗೀತಾಂಜಲಿ, ಇವರುಗಳು ಕ್ರೀಡೆಗಾಗಿ, ಬಿಜಾಪುರ ಜಿಲ್ಲೆಯ ಅಶ್ವಿನಿ ಶೈಕ್ಷಣಿಕ ಕ್ಷೇತ್ರಕ್ಕಾಗಿ, ಹಾಸನ ಜಿಲ್ಲೆಯ ಕುಮಾರ್ ಸಾಂಸ್ಕೃತಿಕ ಕ್ಷೇತ್ರಕ್ಕಾಗಿ ನೀಡಲಾಯಿತು.
|
ಬಾಲ್ಯ ವಿವಾಹದಂತಹ ಪದ್ದತಿಯಿಂದ ಮಕ್ಕಳ ಮೂಲಭೂತ ಹಕ್ಕುಗಳಿಗೆ ಚ್ಯುತಿ ಉಂಟಾಗಿದೆ ಎಂದು ಘನತೆವೆತ್ತ ರಾಜ್ಯಪಾಲರಾದ ಶ್ರೀ ಹೆಚ್.ಆರ್.ಭಾರದ್ವಾಜ್ ಅವರು ವಿಷಾದ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜಿಕ ಶಿಕ್ಷಣ ಇಲಾಖೆ, ಕರ್ನಾಟಕ ಶಿಶು ಕಲ್ಯಾಣ ಸಂಸ್ಥೆ ಹಾಗೂ ರಾಜ್ಯ ಬಾಲಭವನ ಸೊಸೈಟಿ ಇವರುಗಳ ಸಮುಕ್ತಾಶ್ರಯದಲ್ಲಿ ಕಬ್ಬನ್ ಉದ್ಯಾನವನದಲ್ಲಿರುವ ಬಾಲಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ಚೈಲ್ಡ್ ಟ್ರ್ಯಾಕಿಂಗ್ ತಂತ್ರಾಂಶ ಬಾನಂಗಳದತ್ತ ಬಾಲೆ ಹಾಗೂ ಬಾಲಭವನದ ವೆಬ್‌ಸೈಟ್‌ನ್ನು ಲಾಂಚ್ ಮಾಡಿ ಮಾತನಾಡಿದ ಅವರು ಈ ವರ್ಷ ಆಯ್ಕೆ ಮಾಡಿಕೊಂಡಿರುವ ಬಾಲ್ಯವಿವಾಹ ತಡೆಗಟ್ಟಿ ಎಂಬ ವಿಷಯ ತುಂಬಾ ಅರ್ಥಪೂರ್ಣವಾಗಿದೆ ಎಂದರು.
ಶ್ರೀ ಜಗದೀಶ್ ಶೆಟ್ಟರ್ ಅವರು ಸಂಪುಟ ದರ್ಜೆ ಸಚಿವರಾಗಿ ಘನತೆವೆತ್ತ ರಾಜ್ಯಪಾಲರಾದ ಶ್ರೀ ಎಚ್. ಆರ್. ಭಾರದ್ವಾಜ್ ಅವರಿಂದ ರಾಜಭವದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರು ಉಪಸ್ಥಿತರಿದ್ದರು.
|
|
|